೨೭.೯.೧೯೭೫
ನಾಡ ನುಡಿ, ನಾಡ ಜನ, ನಾಡ ಕಾರ್ಮಿಕರು, ಕೌಶಲ್ಯಪರಿಪೂರ್ಣರು, ಬುದ್ಧಿಜೀವರುಗಳ ಸುಗಮವನ್ನು ಸಂದರ್ಶಿಸುವ ಮಹಾಭಾಗ್ಯ ಈ ದಿನದಿಂದ ಆಯಿತು. ಸುಮಾರು ೫೦ ವರ್ಷಗಳ ಹಿಂದೆ ಈ ಪವಿತ್ರ ಸಂಘ ಮಹಾರಾಜರ ಅಮೃತಹಸ್ತದಿಂದ ಪ್ರಾರಂಭವಾಗಿ – ಬಂಗಾರದ ಉತ್ಸವಕ್ಕೆ ಪೂರ್ವಭಾವಿಯಾಗಿ ನಾನು ಬಂದೆ – ಅಚ್ಚುಕಟ್ಟಿನ ಕಟ್ಟುಪಾಡಿನ ಕೂಡಿ ಬಾಳುವ ಈ ನವೋದಯ ಸಂಘದ ಪತಿ ವಿಷಯವೂ ಶ್ಲಾಘನೀಯ, ಅವರ್ಣೇಯ, ಸೌಜನ್ಯತೆಯ ಆಗರದ ಈ ಕರ್ಮಭೂಮಿಗೆ ತನ್ನತನವನ್ನ ಪುರೋತತ್ವದ ಪೌರೋಹಿತ್ಯ ವಹಿಸಿಕೊಂಡಿರುವ ಪ್ರತಿಕಾರ್ಯಕರ್ತರಿಗೂ, ಸದಸ್ಯರಿಗೂ ಭುವನೇಶ್ವರಿ ಸರ್ವಶಕ್ತಿಯನ್ನು ಅನುಗ್ರಹಿಸಲಿ. ಆಶೀರ್ವದಿಸಲಿ.
ಇರುವ ಸದಸ್ಯರ ಬ್ಯಾಂಕು ಪ್ರಾರಂಭವಾಗಲಿ. ಅವರ ಹಣ ದೀನ ದಲಿತರ ದೇವರಾಗಲಿ – ತನ್ನ ಅವಸರಕ್ಕೆ ಅಕ್ಕರೆಯ ಸಹಾಯ ಇದರಿಂದಾಗಲಿ. ಒಂದು ರೂ, ಒಬ್ಬ ಸದಸ್ಯರ ಕಾಣಿಕೆ – ಮುಖ್ಯವಾಗಿ ಮಾಡುವಿರೆಂದು ನಂಬಿರುವೆ.