ಮೈಸೂರು ಅಸೋಸಿಯೇಷನ್ ತಮ್ಮ ಸದಸ್ಯರಿಗಾಗಿ ಎರಡು ದಿನಗಳ ವಿಹಾರಕೂಟವನ್ನು ರಾಯಘಡ ಜಿಲ್ಲೆಯ "ಹರಿಹರೇಶ್ವರದಲ್ಲಿ" ಏರ್ಪಡಿಸಿತ್ತು. ದಿನಾಂಕ 30.01.2015 ಶುಕ್ರವಾರ ರಾತ್ರಿ 9.00ಗಂಟೆಗೆ ಅಸೋಸಿಯೇಷನ್ನಿಂದ ಪ್ರಯಾಣ ಪ್ರಾರಂಭವಾಯಿತು. ಬಸ್ಸು ಹೊರಡುತ್ತಿದ್ದಂತೆ ಸದಸ್ಯರಿಂದ ಅಂತ್ಯಾಕ್ಷರಿ ಕಾರ್ಯಕ್ರಮ ಆರಂಭಗೊಂಡಿತು. ಅಂತ್ಯಾಕ್ಷರಿ ಕಾರ್ಯಕ್ರಮದ ನಡು-ನಡುವೆ ಬಿ.ಆರ್. ಮಂಜುನಾಥ್ ಹಾಗೂ ಕೆ. ಮಂಜುನಾಥಯ್ಯ ಅವರಿಂದ ಹಾಸ್ಯದ ಮಾತು ಆಗಾಗ ತೇಲಿ ಬರುತ್ತಿತ್ತು. ಈ ಸಮಯದಲ್ಲಿ ಸದಸ್ಯರು ತಾವು ತಂದ ತಿನ್ನಿಸುಗಳನ್ನು ಕೂಡ ಎಲ್ಲರಿಗೂ ಹಂಚಿದರು. ಅಂತ್ಯಾಕ್ಷರಿಯಲ್ಲಿ ಒಂದು ರೀತಿ ಸ್ಪರ್ಧೆ ಏರ್ಪಟಿತ್ತು ಅಂತ ಕೂಡ ಹೇಳಬಹುದು. ಯಾಕೆಂದರೆ ಅಷ್ಟೊಂದು ಆಸಕ್ತಿಯಿಂದ ಯಾರು ಸಹ ಸೋಲದೆ ಹಾಡನ್ನ ನೆನೆದು ಹಾಡುತ್ತಿದ್ದರು. ಚಿಕ್ಕ ಮಕ್ಕಳು ಸಹ ತಮ್ಮದೇ ಒಂದು ಸೈನ್ಯವನ್ನು ಕಟ್ಟಿಕೊಂಡು ದೊಡ್ಡವರಿಗಿಂತ ನಾವೂ ಏನು ಕಮ್ಮಿ ಇಲ್ಲ! ಅನ್ನೋ ತರಹ ಬಸ್ಸಿನಲ್ಲಿ ಅವರದೇ ಆದ ಅಂತ್ಯಾಕ್ಷರಿ ಕಾರ್ಯಕ್ರಮ ನಡೀತಾ ಇತ್ತು. ಅಂತ್ಯಾಕ್ಷರಿ ಕಾರ್ಯಕ್ರಮ ರೆಸಾರ್ಟ್ಗೆ ತಲುಪುವ ತನಕವೂ ನಡೆದಿದ್ದು ವಿಹಾರಕೂಟಕ್ಕೆ ಬಂದವರ ಆಸಕ್ತಿಯನ್ನು ತೋರಿಸುತ್ತಿತ್ತು. ಬೆಳಿಗ್ಗೆ ಸೂಮಾರು 6 ಗಂಟೆಗೆ ಅಂದರೆ ಶನಿವಾರ ಬೆಳಿಗ್ಗೆ ರೆಸಾರ್ಟಗೆ ತಲುಪಿದೆವು. ನಂತರ ಸ್ವಲ್ಪ ಸಮಯ ವಿಶ್ರಾಂತಿಯನ್ನು ಪಡೆದು. ನಂತರ ರೆಸಾರ್ಟ್ಗೆ ಪಕ್ಕದಲ್ಲೇ ಇರುವ ಸಮುದ್ರಕ್ಕೆ ಹಿರಿಯ ಸದಸ್ಯರೆಲ್ಲರೂ ಒಂದು ಸುತ್ತು ವಾಕ್ ಮಾಡಿದರೆ, ಮಕ್ಕಳ ಸೈನ್ಯ ಮಾತ್ರ ಸಮುದ್ರದ ನೀರಿನಲ್ಲಿ ಆಡಲು ಧುಮುಕಿ ಬಿಟ್ಟಿತ್ತು. ನಂತರ ಎಲ್ಲರೂ ಒಂದಾಗಿ ಹರಿಹರೇಶ್ವರ ಮಂದಿರಕ್ಕೆ ಹೋಗಿ ದೇವರ ದರುಶನ ಪಡೆದು ಬಂದರು. ಅಲ್ಲಿನ ವಾಡಿಕೆಯಂತೆ ಹರಿಹರೇಶ್ವರನ ದರುಶನ ಮಾಡುವ ಮೊದಲು ಕಾಲಭೈರವನ ದರುಶನ ಮಾಡಿ ನಂತರ ಹರಿಹರೇಶ್ವರನ ದರುಶನ ಪಡೆದರು. ಆ ದಿನ ಸಂಜೆ ಮತ್ತೆ ಅಲ್ಲೇ ಹತ್ತಿರದಲ್ಲಿ ಇರುವ ಸಮುದ್ರ ಕಿನಾರೆಗೆ ಎಲ್ಲರೂ ತೆರಳಿ ಅಲ್ಲಿ ವಿವಿಧ ಬಗೆಯ ತಮ್ಮಗೆ ಇಷ್ಟವಾದ ಆಟಗಳನ್ನ ಆಡಿದರು. ಕೆಲವರು ಕ್ರಿಕೆಟ್, ಕೆಲವರು ರಿಂಗ್ ಎಸೆಯುವ ಆಟ, ಫುಟ್ಬಾಲ್, ಮತ್ತೆ ಕೆಲವು ಮಹಿಳಾ ಸದಸ್ಯರು ಕುಂಟೆಬಿಲ್ಲೆ ಆಟವನ್ನು ಆಡಿ ತಮ್ಮ ಬಾಲ್ಯದ ದಿನಗಳನ್ನು ನೆನೆದರು. ಕ್ರಿಕೆಟ್ ಆಟದಲ್ಲಿ ಶ್ರೀ ಮಂಜುನಾಥಯ್ಯ ಹಾಗೂ ಕೆಲವು ಮಹಿಳಾ ಸದಸ್ಯರು ಸಹ ಭಾಗವಹಿಸಿರುವುದು ವಿಶೇಷವಾಗಿತ್ತು. ಕ್ರಿಕೆಟ್ ಆಟದಲ್ಲಿ ನಿರ್ಣಾಯಕರಾಗಿ ಬಿ.ಆರ್. ಮಂಜುನಾಥ್ ಅವರು ಸಹಕರಿಸಿದರು. ಆಟ ಮುಗಿದ ಮೇಲೆ ಎಲ್ಲರೂ ಮರಳಿ ರೆಸಾರ್ಟ್ಗೆ ಬಂದರು. ರಾತ್ರಿ ಊಟಕ್ಕೂ ಮುನ್ನ "ಮಾನವ ಜನ್ಮ ಶ್ರೇಷ್ಠವೋ? ಅಥವಾ ಪ್ರಾಣಿ ಜನ್ಮ ಶ್ರೇಷ್ಠವೋ?" ಅನ್ನುವ ವಿಚಾರದ ಮೇಲೆ ತಮ್ಮ ಅಭಿಪ್ರಾಯವನ್ನು ಮಂಡಿಸಲು ಎಲ್ಲಾ ಸದಸ್ಯರಿಗೂ ಒಂದು ಅವಕಾಶವನ್ನು ನೀಡಲಾಯಿತು. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸಿ ಕೊನೆಯಲ್ಲಿ ಎರಡು ಜನ್ಮವು ಸಮಾನ ಅನ್ನುವ ತೀರ್ಮಾನಕ್ಕೆ ಬಂದು
ಆಮೇಲೆ ಊಟಕ್ಕೆ ಹೋಗಿ ಊಟ ಮುಗಿಸಿ ಮತ್ತೆ ಗುಂಪು ಸೇರಿ ಹೌಸಿ ಆಟ, ಮೂಕಾಭಿಯನಯದ ಆಟ ಮಧ್ಯರಾತ್ರಿಯ ತನಕವೂ ನಡೆಯಿತು.
ಮರುದಿನ ಅಂದರೆ ರವಿವಾರ ಬೆಳಿಗ್ಗೆ 7 ಗಂಟೆಗೆ ಕೆಲವರು ಸಮುದ್ರದ ದಡದಲ್ಲಿ ವಾಕ್ ಗೆ ಹೋದರೆ, ಇನ್ನು ಕೆಲವರು ಸಮುದ್ರದ ನೀರಿನಲ್ಲಿ ಆಟಕ್ಕೆ ಇಳಿದು ಅದರ ಮಜಾವನ್ನು ಅನುಭವಿಸಿದರು. ಸಮುದ್ರದದ ನೀರಿನಲ್ಲಿ ಆಟವಾಡುತ್ತಿದ್ದವರು ಎಷ್ಟೇ ಕರೆದರು ದಡಕ್ಕೆ ಬಾರದೆ ಇರೋದನ್ನ ನೋಡಿದರೆ ವಿಹಾರಕೂಟದ ಸಂಪೂರ್ಣ ಮಜಾವನ್ನು ಅನುಭವಿಸಿದ್ದು ತಿಳಿಯುತ್ತದೆ. ಆಮೇಲೆ ಬೆಳಿಗ್ಗೆ 10 ಗಂಟೆಗೆ ದೇವರ ಸನ್ನಿಧಾನಕ್ಕೆ ಹೋಗಿ ಹರಿಹರೇಶ್ವರನಿಗೆ ಅಭಿಷೇಕವನ್ನು ಮಾಡಿಸಲಾಯಿತು. ನಂತರ ರೆಸಾರ್ಟ್ಗೆ ಬಂದು ಊಟ ಮುಗಿಸಿ ಮಧ್ಯಾಹ್ನ 2 ಗಂಟೆಗೆ ರೆಸಾರ್ಟ್ನಿಂದ ಹೊರಡಲಾಯಿತು. ನಾವು ಬರುವ ದಾರಿ ಮಧ್ಯೆ ಸಿಗುವ ಪ್ರಸಿದ್ಧ ಗಣೇಶನ ಮಂದಿರಕ್ಕೂ ಹೋಗಿ ಬರಲಾಯಿತು. ಬರುವಾಗ ಸಹ ಅಂತ್ಯಾಕ್ಷರಿ ಕಾರ್ಯಕ್ರಮವು ನಡೆಯುತ್ತಿದ್ದು ಇನ್ನೊಂದು ವಿಶೇಷವಾಗಿತ್ತು. ಕೊನೆಗೆ ಎಲ್ಲರೂ ಸೇರಿ ಈ ವಿಹಾರಕೂಟದ ಸಂಪೂರ್ಣ ಉಸ್ತುವಾರಿಯನ್ನು ಎಳ್ಳಷ್ಟೂ ಲೋಪವಿಲ್ಲದಂತೆ ಆಯೋಜಿಸಿದ ಶ್ರೀ. ಶಶಿಕಾಂತ್ ಜೋಶಿ ಅವರಿಗೆ ಧನ್ಯಾವಾದವನ್ನು ಅರ್ಪಿಸಲಾಯಿತು.